Saturday, August 03, 2019
Nag Panchami is a traditional worship of serpent Gods
Nag Panchami is a traditional worship of serpent Gods observed by Hindus throughout India. In Hindu calendar, some days are considered significant to worship serpent Gods and Panchami Tithi especially during Shravan month is considered highly auspicious to worship serpent Gods. Nag Panchami is one of those significant days and it observed on Shukla Paksha Panchami during Shravana month.
Article Source: One India, Manju Neereshwallya
ನಾಗರ ಪಂಚಮಿ ಬಂತೆಂದರೆ ಹಬ್ಬಗಳ ಸಡಗರ ಶುರುವಾಯಿತು ಎಂದೇ ಅರ್ಥ. ಈ ವರ್ಷ ನಾಗರ ಪಂಚಮಿ ಆಗಸ್ಟ್ 5ರಂದು ಬಂದಿರುವುದರಿಂದ ಜನರ ಸಡಗರ ಮತ್ತಷ್ಟು ಹೆಚ್ಚಿದೆ ನಾಗರಪಂಚಮಿಯನ್ನು ಸಡಗರ-ಸಂಭ್ರಮದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ.
ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ದಿನ ನಾಗದೇವನಿಗೆ ಹಾಲೆರೆದು, ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸು ಎಂದು ಭಯ, ಭಕ್ತಿಯಿಂದ ಪ್ರಾರ್ಥಸುತ್ತಾರೆ.
ಸಹೋದರ-ಸಹೋದರಿಯ ಅನುಬಂಧವನ್ನು ಸೂಚಿಸುವ ಹಬ್ಬ ಇದಾಗಿದೆ. ಹಾವು ಕಡಿದು ಮೃತಪಟ್ಟ ಸಹೋದರನನ್ನು ಬದುಕಿಸಿಕೊಡುವಂತೆ ಹಾವಿನಲ್ಲಿ ಸಹೋದರಿ ಪ್ರಾರ್ಥನೆ ಮಾಡಿ ತನ್ನ ಸಹೋದರನನ್ನು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲ ಪಕ್ಷವಾಗಿತ್ತು, ಅಲ್ಲಿಂದ ಆ ದಿನವನ್ನು ಭಾತೃತ್ವದ ಸಂಕೇತವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುವುದು ಎಂಬ ಪುರಾಣ ಕತೆ ಇದೆ.
ನಾಗರ ಪಂಚಮಿ ಆಚರಣೆ
ನಾಗರ ಪಂಚಮಿಯೆಂದು ಹಬ್ಬದ ಅಡುಗೆಗಳನ್ನು ಸಿದ್ಧ ಮಾಡಿ, ನಂತರ ಪಕ್ಕದಲ್ಲಿರುವ ಹುತ್ತವನ್ನು ಪೂಜಿಸಿ ಹಾಲೆರೆದು, ಶೇಂಗಾ, ಎಳ್ಳು, ಕಡುಬು ನಾನಾ ತರದ ಉಂಡೆಗಳನ್ನು ನೈವೇದ್ಯ ಮಾಡಿ ಅದನ್ನು ಅಕ್ಕ-ಪಕ್ಕದ ಮನೆಯವರಿಗೆ ಹಂಚಿ ಸಂಭ್ರಮಿಸುತ್ತಾರೆ.
ನಾಡಿಗೇ ದೊಡ್ಡ ಹಬ್ಬ ನಾಗರ ಪಂಚಮಿ ವೈಶಿಷ್ಟ್ಯ:
ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಆಗಸ್ಟ್ 5 ರಂದು ಭಕ್ತಿ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.
ನಾಗರ ಪಂಚಮಿ ಹಬ್ಬ ವನ್ನು ಭಾರತದ ಹಲವು ಭಾಗಗಳಲ್ಲಿ ಹಿಂದುಗಳು ಆಚರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ಮತ್ತಷ್ಟು ಮಹತ್ವದ ಸ್ಥಾನವಿದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ. ಪುರಾಣ ಕತೆಯೊಂದರ ಪ್ರಕಾರ ಹಾವು ಕಚ್ಚಿ ಮಡಿದ ತನ್ನ ಸಹೋದರನನ್ನು ಸಹೋದರಿಯೊಬ್ಬಳು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು. ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಕೆಲವೆಡೆ ಆಚರಿಸಲಾಗುತ್ತದೆ.
ತುಳುನಾಡಿನಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ
ಪರಶುರಾಮ ಸೃಷ್ಟಿಯ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರಪಂಚಮಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪಾರ್ಥನೆ ನೇರವೇರಿಸಿದರು.
ದೇವಾಳದ ನಾಗ ಬನದಲ್ಲಿ ನಾಗದೇವರಿಗೆ ದೇವಾಳದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಹಾಲು, ಕ್ಷೀರಾ, ತುಪ್ಪ, ಜೇನಿನೊಂದಿಗೆ ಪಂಚಾಮೃತ ಆಭಿಷೇಕವನ್ನು ಮಾಡಿ ವಿಶೇಷ ಪೂಜೆ ನೆರವೇರಿಸಿದರು. ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ ನಾಗ ದೋಷ ಪರಿಹಾರ, ಸಂತಾನ ಪ್ರಾಪ್ತಿ ಹಾಗೂ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದು.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಲ್ಲಿಯೂ ನಾಗರಪಂಚಮಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ದೇಶದೆಲ್ಲೆಡೆಯಿಂದ ಬಂದ ಭಕ್ತಾಧಿಗಳು ನಾಗನ ವಿಗ್ರಹಕ್ಕೆ ಹಾಲಿನ ಹಾಗೂ ಸೀಯಾಳಾಭಿಷೇಕ ಮಾಡುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಮುಂಜಾನೆಯಿಂದಲೇ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದು, ನಾಗನ ವಿಗ್ರಹಕ್ಕೆ ಹಾಲೆರೆಯಲು ಸರತಿ ಸಾಲಿನಲ್ಲಿ ನಿಂತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು. ದೇವಸ್ಥಾನಗಳಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಕುಟುಂಬದ ಮೂಲ ಮನೆಗಳಲ್ಲಿಯೂ ನಾಗನಿಗೆ ಹಾಲಿನಭಿಷೇಕವನ್ನು ಮಾಡುವ ಸಂಪ್ರದಾಯ ತುಳುನಾಡಿನಲ್ಲಿ ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ.
18 ಪೇಟೆಯ ದೇವಳದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ
ತುಳುನಾಡಿನಲ್ಲಿ ಹಿಂದಿನಿಂದಲೂ ನಾಗದೇವರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಬುಧವಾರ ನಾಗರಪಂಚಮಿ ಪ್ರಯುಕ್ತ ಕಾಸರಗೋಡಿನ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಗೆ ಗರುಡಪಂಚಮಿ ಮತ್ತು ನಾಗರ ಪಂಚಮಿ ಎಂದು ಹೆಸರಿದೆ. ನಾಗರ ಪಂಚಮಿಯಂದು ಅಕ್ಕಿ, ತೆಂಗಿನಕಾಯಿ ಇಟ್ಟು ನಾಗರ ಕಲ್ಲಿಗೆ ಪಂಚಾಮೃತ ಅಭಿಷೇಕ ಮಾಡಿ ಆರಾಧಿಸುವ ಸಂಪ್ರದಾಯವಿದೆ.
ಮಂಜೇಶ್ವರದಲ್ಲಿ ನಾಗಪಂಚಮಿಯಂದು ಸಾವಿರಾರು ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. ಬುಧವಾರ ಬೆಳಗ್ಗೆಯಿಂದ ಸುರಿಯುತ್ತಿದ್ದ ಮಳೆಯ ನಡುವೆಯೇ ಸಾವಿರಾರು ಭಕ್ತಾದಿಗಳು ಮಂಜೇಶ್ವರದ ಅನಂತೇಶ್ವರ ದೇವಾಲಯಕ್ಕೆ ಆಗಮಿಸಿ ದೇವಸ್ಥಾನದ ಆವರಣದಲ್ಲಿರುವ ನಾಗರಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿದರು.
ಬುಧವಾರ ಕಾಸರಗೋಡಿನ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು. ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿ ಪಡೆದಿರುವ ಅನಂತೇಶ್ವರ ದೇವಾಲಯಕ್ಕೆ ನಾಗರ ಪಂಚಮಿಯಂದು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ಭಕ್ತರು ನಾಗರ ಕಲ್ಲಿಗೆ ಪಂಚಾಮೃತ ಮತ್ತು ಕ್ಷೀರಾಭಿಷೇಕ ಮಾಡಿದರು. ಪುರಾಣ ಪ್ರಸಿದ್ಧ ಅನಂತೇಶ್ವರ ದೇವಾಲಯಕ್ಕೆ ಮಂಗಳೂರು, ಉಡುಪಿ ,ಕುಂದಾಪುರ , ಪುತ್ತೂರು , ಹಾಸನ, ಮಡಿಕೇರಿ, ಮುಂಬೈ , ಬೆಂಗಳೂರು , ಚೆನೈ ಮುಂತಾದ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಕರಾವಳಿಯಲ್ಲಿ ನಾಗರ ಪಂಚಮಿ ಆಚರಣೆ ಬಂದದ್ದು ಹೇಗೆ ಗೊತ್ತೆ?
ಶ್ರಾವಣ ಮಾಸದಲ್ಲಿ ಮೊದಲು ಬರುವ ಹಬ್ಬ, ಭಯ, ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ನಾಗರ ಪಂಚಮಿ. ಪ್ರಾಥಃ ಕಾಲದಲ್ಲಿ ಪ್ರತಿಯೊಬ್ಬರು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ಕುಟುಂಬದವರು ತಲ ತಲಾಂತರದಿಂದ ನಂಬಿಕೊಂಡು ಬಂದಿರುವ ನಾಗಬನದಲ್ಲಿ ಶ್ರೀ ನಾಗದೇವರಿಗೆ ತನು ಹಾಕಿಸುವುದು ವಾಡಿಕೆ. ನಾಗದೇವರಿಗೆ ಪ್ರಿಯವಾದ ಲವಂಚ, ಸಿಂಗಾರ ಹೂವು, ಅಕ್ಕಿ, ಕಾಯಿ, ಬಾಳೆಹಣ್ಣು ತಂಬಿಟ್ಟು (ಅಕ್ಕಿ ಬೆಲ್ಲದಿಂದ ಅರ್ಚಕರು ತಯಾರಿಸಿತ್ತಾರೆ) ಅರಳು ಬೆಲ್ಲ ವಿವಿಧ ಹೂವುಗಳು, ನಾಗದೇವರಿಗೆ ಪ್ರಿಯವಾದ ಕೇದಿಗೆಹೂವು, ಸೀಯಾಳ (ಎಳನೀರು) ಹಾಲು ಅಭಿಷೇಕವನ್ನು ತಂದಿರಿಸಿಅರ್ಚಕರು ವಿಧಿ ವಿಧಾನಗಳಿಂದ ನಾಗದೇವರಿಗೆ ಪೂಜಿಸುತ್ತಾರೆ.
ಇಡೀ ಭೂಮಂಡಲವನ್ನೇ ಹೊತ್ತು ನಮ್ಮನ್ನು ರಕ್ಷಿಸಿ ಮಾನವರ ಸರಿ ತಪ್ಪುಗಳ ಬಗ್ಗೆ ಆಗಾಗ್ಗೆ ಪ್ರತ್ಯಕ್ಷವಾಗಿ ಎಚ್ಚರಿಸುತ್ತಾ ಸರಿದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ಕಲಿಯುಗದವರಿಗೆ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಾಗದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವ ದಿನ ಬಂದಿದೆ. ನಾಗಾರಾಧನೆಯಿಂದ ರೋಗ-ರುಜಿನಾಧಿಗಳು ಮತ್ತು ವಿವಾಹ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ ಎಂಬ ನಂಬಿಕೆಯಿದೆ. ನಾಗ ಪ್ರತ್ಯಕ್ಷ ದೇವ: ಸಮುದ್ರ ಮಥನ ಕಾಲದಲ್ಲಿ ಮಂದರ ಪರ್ವತಕ್ಕೆ ಹಗ್ಗವಾಗಿ ಸಹಾಯ ಮಾಡಿದ್ದಾನೆ.
ಹಾಗೆಯೇ ತಕ್ಷಕ ಇಂದ್ರನ ಮಿತ್ರನಾಗಿ ಆಸ್ತಿಕ ಮಹರ್ಷಿಯ ಸಹಾಯದಿಂದ ಜನಮೇಜಯ ಮಹಾರಾಜನ ಸರ್ಪಯಾಗದಲ್ಲಿ ನಾಗಕುಲವನ್ನೇ ಬದುಕಿಸಿ ಮಹತ್ಕಾರ್ಯ ಮಾಡಿ ನಮ್ಮನ್ನು ಕಾಪಾಡಿದ್ದಾನೆ ನಾಗ ದೇವರು. ಮಾನವನಾಗಿ ಹುಟ್ಟಿದವನು ಜೀವನೋಪಾಯಕ್ಕೆ ಊರಿನಿಂದ ಊರಿಗೆ ಹೋಗಿ ಜೀವಿಸುತ್ತಾನೆ. ಆದರೆ ಆತ ಎಲ್ಲೇ ಇರಲಿ ಆತ ನಂಬಿದ ಮೂಲ ನಾಗದೇವರಿಗೆ ವರ್ಷಕ್ಕೊಮ್ಮೆ ನಾಗರ ಪಂಚಮಿಯಂದು ನಾಗ ತನು ಸೇವೆ ಹಾಕಿಸಿ ನಾಗದೇವರ ಅನುಗ್ರಹ ಪಡೆಯಬೇಕು.
ನಾಗದೇವರಿಗೆ ವರ್ಷಕ್ಕೊಮ್ಮೆ ನಾಗನ ಕಲಶ ಮಾಡಿಸಿ (ಶುದ್ದ ಕಲಶ) ಹಾಕಿಸಿದಾಗ ಆಯುರಾರೋಗ್ಯ ಭಾಗ್ಯ ತೇಜಸ್ಸು ಸಂಪತ್ತು ನೆಮ್ಮದಿ ಸುಖ- ಸಂತೋಷ ಶ್ರೀ ನಾಗದೇವರ ಅನುಗ್ರಹದಿಂದ ಪಡೆಯಬಹುದಾಗಿದೆ. ಅಂದಹಾಗೆ ಕರಾವಳಿಯಲ್ಲಿ ನಾಗರ ಪಂಚಮಿ ಹೇಗೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ವಿವರವಾದ ಲೇಖನ ಇಲ್ಲಿದೆ...
ನಾಗಗಳ ಆರೈಕೆ ಆಚರಣೆಯಾಯಿತು ಪರಶುರಾಮ ದೇವರು ಸಮುದ್ರ ರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ. ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ. ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ. ಗಾಯಕ್ಕೆ ಅರಿಶಿನ ಹಚ್ಚಿ, ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೆವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ.
ನಾಗಬನವಾಗುತ್ತಿದೆ ಕಾಂಕ್ರಿಟ್ ಗೂಡು ನಾಗಬನಗಳು ಪ್ರಕೃತಿ ಮಾತೆಯ ಮಡಿಲಲ್ಲಿ ಇರಬೇಕು. ನಾಗಬನ ಮರದ ಬುಡದಲ್ಲೇ ಇರಬೇಕು. ಗಿಡಮರ ಕಡಿದು ನಾಗಬನ ಕಾಂಕ್ರಿಟ್ ನಿಂದ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಇದರಿಂದ ನಿಜ ನಾಗರಗಳಿಗೆ ವಾಸಿಸಲು ನೆಲೆ ಇಲ್ಲದಂತಾಗಿ ಮನುಷ್ಯ ವಾಸಿಸುವ ಮನೆಗಳಿಗೆ ಪ್ರವೇಶ ಮಾಡುತ್ತಿವೆ. ಇದರಿಂದ ಹಾವುಗಳು ಮಾನವನ ಕೈಗೆ ಸಿಕ್ಕು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೇ, ಮನುಷ್ಯ ಮನೆಗಳಿಗೆ ಬರುವ ಹಾವುಗಳನ್ನು ಓಡಿಸುವ ಕಾರಣ ನಾಗರಹಾವುಗಳು ರಸ್ತೆಗಳಲ್ಲಿ ಅಡ್ಡ ದಿಡ್ಡಿ ಓಡಾಡಿ ವಾಹನಗಳಿಗೆ ಸಿಕ್ಕಿ ಸಾಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.
ಹೀಗಿರಲಿ ನಾಗಬನ ಮರದ ಬುಡದಲ್ಲಿ ಹಾಡಿ(ಕಾಡಿನಲ್ಲಿ)ಯಲ್ಲಿ ನಾಗಬನವಿದ್ರೆ ಅಲ್ಲಿ ನಾಗರ ಹಾವುಗಳು ಮರಿ ಮೊಟ್ಟೆಯೊಡನೆ ಜೀವಿಸುತ್ತವೆ. ಎಲ್ಲಾ ಕಡೆ ಮರ ಕಡಿದು ಪ್ರಕೃತಿ ನಾಶ ಮಾಡುವುದರಿಂದ ನಾಗನಿಗೆ ಮನೆಯಿಲ್ಲದಂತಾಗಿದೆ. ಇಡೀ ಭೂಮಿಯನ್ನು ಹೊತ್ತು ನಿಧಿ ಸಂರಕ್ಷಣೆ ಮಾಡಿ ಮನುಕುಲವನ್ನು ರಕ್ಷಿಸುತ್ತಿರುವ ನಾಗನಿಗೆ ವಾಸಿಸಲು ಯೋಗ್ಯವಾದ ಪರಿಸರಯುಕ್ತ ನಾಗಬನವಾಗಲಿ. ಕಾಂಕ್ರಿಟ್ ನಾಗಬನ ನಾಗ ದೇವರಿಗೆ ಅಪ್ರಿಯವಾದುದೆಂಬ ನಂಬಿಕೆಯಿಂದಾದರೂ ಪರಿಸರ ಉಳಿಸುವ ಕೆಲಸವಾಗಬೇಕಾಗಿದೆ. ಇನ್ನು ಮುಂದೆ ನಾಗಬನ ಮಾಡುವವರು ಗಿಡ ಮರಗಳ ನಡುವೆ ಪ್ರಕೃತಿ ಮಡಿಲಿನ ಸ್ವಚ್ಚ ಹಸಿರಿನ ಸುಂದರ ನಾಗಬನ ನಿರ್ಮಾಣವಾಗಬೇಕಾಗಿದೆ.
ನಾಗ ಚತುರ್ಥಿ ನಾಗರ ಪಂಚಮಿ ಮೊದಲಿನ ದಿನ ಕೆಲವು ಜನರು ಉಪವಾಸ ಮಾಡುವರು ಮತ್ತು ನಾಗರ ಪಂಚಮಿ ಮೊದಲ ದಿನ ಮಾಡುವಂತಹ ಉಪವಾಸವನ್ನು ನಾಗ ಚತುರ್ಥಿ ಅಥವಾ ನಾಗುಲ ಚೌತಿ ಎಂದು ಕರೆಯಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ನಾಗ ಚತುರ್ಥಿ ಅಥವಾ ನಾಗುಲ ಚೌತಿಯನ್ನು ದೀಪಾವಳಿ ಬಳಿಕ ಆಚರಿಸಲಾಗುತ್ತದೆ ಮತ್ತು ಇದೇ ವೇಳೆ ತಮಿಳುನಾಡಿನಲ್ಲಿ ಸೂರ ಸಮಹಾರಮ್ ಹಬ್ಬವು ನಡೆಯುವುದು.
ನಾಗರ ಪಂಚಮಿಯಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ? ನಾಗರ ಪಂಚಮಿಯ ದಿನ ವಿಷ್ಣು ದೇವರನ್ನು ಸಹ ಆರಾಧಿಸಲಾಗುತ್ತದೆ. ಈ ಪೂಜೆಯ ಹಿಂದೆ ಒಂದು ಪವಿತ್ರವಾದ ಪುರಾಣದ ಹಿನ್ನೆಲೆಯಿದೆ ಎಂದು ಹೇಳಲಾಗುವುದು. "ಕಲಿಯಾ ನಾಗ ಒಮ್ಮೆ ಯಮುನಾ ನದಿಯ ನೀರಿನಲ್ಲಿ ಪ್ರವೇಶಿಸಿತು. ಇದರ ಪರಿಣಾಮವಾಗಿ ನದಿಯ ನೀರೆಲ್ಲಾ ಕಪ್ಪು ಬಣ್ಣಕ್ಕೆ ತಿರುಗಿತು. ಜೊತೆಗೆ ನದಿಯ ನೀರೆಲ್ಲಾ ವಿಷವಾಗಿ ಪರಿವರ್ತನೆಯಾಯಿತು.
Subscribe to:
Post Comments (Atom)
No comments:
Post a Comment