Monday, February 24, 2020
ಶ್ರೀ ಮಹಾಮಾಯಾ ದೇವಸ್ಥಾನ ಮಂಗಳೂರು ಸ್ಥಳ ಪುರಾಣ : ಚಿತ್ರ ಮತ್ತು ಲೇಖನ : ಮಂಜು ನೀರೇಶ್ವಾಲ್ಯ
ಶ್ರೀ ಕುಡ್ತೆರಿ ಮಹಾಮಾಯಾ ಪ್ರಸನ್ನಾ
ಸರ್ವಶಕ್ತಿ ಮಹಾಮಾಯಾ ದಿವ್ಯಜ್ಞಾನ ಸ್ವರೂಪಿಣಿ ನವದುರ್ಗೆ ಜಗನ್ಮಾತ ಪ್ರಣಮಾಮಿ ಮುಹರ್ಮುಹು:
ಶ್ರೀ ಮಹಾಮಾಯಾ ದೇವಸ್ಥಾನ ಮಂಗಳೂರು ಸ್ಥಳ ಪುರಾಣ ಆದಿಮಾಯೆಯು , ಶಕ್ತಿ ಸ್ವರೂಪಿಣಿಯೂ ಆದ ಮಂಗಳಾದೇವಿಯ ನೆಲೆಯೂರು ಮಂಗಳೂರು. ಆದಿ ಸ್ವರೂಪಿಣಿಯ ಹಲವು ಪುಣ್ಯಕ್ಷೇತ್ರಗಳು ಇಲ್ಲಿವೆ. ಅವುಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಅತೀ ಪ್ರಾಚೀನ ಕಾಲದ ಶ್ರೀ ಮಹಾಮಾಯಾ ದೇವಸ್ಥಾನವು ಮುಖ್ಯವಾಗಿರುತ್ತದೆ. ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಬಲ ಪಕ್ಕದಲ್ಲೇ ಬಹಳ ಸಮೀಪದಲ್ಲಿದೆ ಶ್ರೀ ಮಹಾಮಾಯ ದೇವಸ್ತಾನ ಗೌಡ ಸಾರಸ್ವತರ ಅತೀ ಪುರಾತನ ದೇವಾಲಯ, ಕ್ರಿ. ಶ. 16ನೇ ಶತಮಾನದ ಪೂರ್ವಾರ್ಧದಲ್ಲಿ ಸ್ಥಾಪನೆಯಾದ ಶ್ರೀ ಮಹಾಮಾಯಾ ದೇವಿಯ ದೇವಳವು ಮಂಗಳೂರಿನ ಪ್ರಾಚೀನ ಪರಂಪರೆಯ ದೇವಸ್ಥಾನಗಳಲ್ಲಿ ಒಂದಾಗಿದೆ.
ಶ್ರೀ ದೇವಿಯ ಆದಿನೆಲೆ
ಮಂಗಳೂರು ಶ್ರೀ ಮಹಾಮಾಯಾ ದೇವಿಯ ಮೂಲಸ್ಥಾನವು ಕೊಂಕಣದ ಗೋವೆಯ ಕುಡ್ತೆರಿ ಗ್ರಾಮವಾಗಿರುತ್ತದೆ. ಅಲ್ಲಿ ಗೌಡ ಸಾರಸ್ವತರು ಮತ್ತು ವೈಶ್ಯವಾಣಿ ಸಮಾಜದವರು ಕುಳಾವಿಗಳಾಗಿ ಭಕ್ತಿಪೂರ್ವಕವಾಗಿ ಈ ದೇವಿಯನ್ನು ಆರಾಧಿಸುತ್ತಾ ಬಂದಿದ್ದರು. ಕ್ರಿ. ಶ. 1510 ರಲ್ಲಿ ಗೋವೆಯು ಪೋರ್ಚುಗೀಸರ ಆಕ್ರಮಣಕ್ಕೆ ತುತ್ತಾ ಯಿತು, ಆ ಬಳಿಕ ಪೋರ್ಚಿಗೀಸರ ಪ್ರಾಬಲ್ಯ ವರ್ಚಸ್ಸು ವೈಪರೀತ್ಯಗಳು ಬಲವಾಗಿ ಬೆಳೆದು ದಲ್ಲದೆ ಅಲ್ಲಿಯ ನಿವಾಸಿಗಳನ್ನು ಕ್ರೈಸ್ತ ಮತಕ್ಕೆ ಸೇರುವಂತೆ ಮಾಡಿದ ಒತ್ತಡ ಒತ್ತಾಯ ಗಳು ಸ್ವಧರ್ಮಾಚರಣೆಗೆ ಅಡ್ಡಿ ಯಾಗಿ ಪೋರ್ಚುಗೀಸರ ಬಾಧೆ ತಡೆಯಲಾರದೆ ಗೋವೆಯಲ್ಲಿ ನೆಲೆಸಿದ್ದ ಗೌಡ ಸಾರಸ್ವತ ಸಮಾಜದವರು, ಮತ್ತಿತರರು ತಮ್ಮ ತಮ್ಮ ಆರಾಧ್ಯ ದೇವ ದೇವಿಯರೊಂದಿಗೆ ಇತರ ಸುರಕ್ಷಿತ ತಾಣಗಳಿಗೆ ಹೋಗಿ ನೆಲೆಸುವಂತಾಯಿತು, ಶ್ರೀ ದೇವಿಯ ಆದೇಶದಂತೆ ಗೌಡ ಸಾರಸ್ವತ ಬ್ರಾಹ್ಮಣ ಬಂಧುಗಳು, ಕುಳಾವಿಗಳು ಮತ್ತು ಭಜಕರು ದೇವಸ್ಥಾನದಲ್ಲಿ ಪೂಜಿಸಲ್ಪಡುತ್ತಿದ್ದ ಶ್ರೀ ಅಮ್ಮನವರ ' ಬೆಳ್ಳಿಯ ಕಲಶ, ಮುಖ ಬಿಂಬ, ಪಾದುಕ, ಹರಿವಾಣ, ಶಿವಲಿಂಗ (ಸಟಿಕದು ) ಮತ್ತು ಗಂಟೆಗಳ ಸಹಿತ ಎರಡು ನಾವೆಗಳಲ್ಲಿ ಸಮುದ್ರ ಮಾರ್ಗವಾಗಿ ಗೋವೆಯಿಂದ ದಕ್ಷಿಣಾಭಿಮುಖವಾಗಿ ಪ್ರಯಾಣಿಸಿ , ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಂಕೊಲೆಯಲ್ಲಿ ತಮ್ಮ ಆಯಾಸ ಪರಿಹರಿಸಲು ತಂಗಿದ್ದರು . ಅಲ್ಲಿಂದ ಪುನಃ ಮುಂದಕ್ಕೆ ಪ್ರಯಾಣ ಮುಂದುವರಿಸುವಾಗ ಒಂದು ಪಂಗಡದ ಇನ್ನು ಮುಂದೆ ಪ್ರಯಾಣ ಮಾಡಲು ಅಶಕ್ತರಿರುವುದರಿಂದ ನಾವು ಶ್ರೀ ಅಮ್ಮನವರ ಹರಿವಾಣವನ್ನು ಇಲ್ಲಿಯೇ ಪ್ರತಿಷ್ಟಾಪಿಸಿ ಅಲ್ಲಿಯೇ ನೆಲೆಸುವುದಾಗಿ ತಿಳಿಸಲು, ಉಳಿದವರು ನಮ್ಮ ಪ್ರಯಾಣವನ್ನು ಮುಂದುವರಿಸಿ ಮಂಗಳೂರಿಗೆ ತಲಪಿದರು.
ಈಗ ದೇವಸ್ಥಾನವಿರುವ ಜಾಗದಲ್ಲಿ ಶ್ರೀ ದೇವಿಯ ಗುಡಿಯನ್ನು ಕಟ್ಟಿಸಿ ಅದರಲ್ಲಿ ಅಮ್ಮನವರ ಕಲಶ, ಮುಖಬಿಂಬ, ಪಾದುಕ, ಶಿವಲಿಂಗ ಮತ್ತು ಗಂಟೆಗಳನ್ನು ಪ್ರತಿಷ್ಠಾಪಿಸಲಾಯಿತು . ಹೀಗೆ ಅಂಕೋಲೆಯಲ್ಲಿ ಶ್ರೀ ಕುಂಡೋದರಿ ದೇವಿ ದೇವಸ್ಥಾನ ಎಂಬ ಹೆಸರಿ ನಿಂದ ಶ್ರೀ ದೇವಿಯು ಪೂಜಿಸಲ್ಪಡುತ್ತಿದ್ದರೆ ಇಲ್ಲಿ ಮಂಗಳೂರಿನಲ್ಲಿ ಶ್ರೀ ಮಹಾಮಾಯಾ ದೇವಸ್ಥಾನ ಎಂಬ ಹೆಸರಿನಿಂದ ಶ್ರೀ ದೇವಿಯು ಪೂಜಿಸಲ್ಪಡುತ್ತಿರುವಳು. -
ಗೋವಾದಲ್ಲಿ ಕುಡ್ತೆರಿ ಗ್ರಾಮದಲ್ಲಿರುವ ಮೂಲ ದೇವಸ್ಥಾನವನ್ನು ಪೋರ್ಚು ಗೀಸರು ಇಗರ್ಜಿಯಾಗಿ ಪರಿವರ್ತಿಸಿರುವುದನ್ನು ಇಂದಿಗೂ ನೋಡಬಹುದು. ಕುಡ್ತೆರಿ ಗ್ರಾಮದಿಂದ ಸುಮಾರು 12 ಕಿ. ಮೀ ದೂರದಲ್ಲಿರುವ ಗುಡೇರ್ ಗ್ರಾಮದಲ್ಲಿ ಮೂಲ ದೇವಸ್ಥಾನದಲ್ಲಿದ್ದ ದೇವತೆಗಳಾದ ಶ್ರೀ ಶಾಂತಾದುರ್ಗ ಮತ್ತು ಚಾಮುಂಡೇಶ್ವರಿ ದೇವಿ ಯವರನ್ನು ಅಲ್ಲಿಯೇ ಉಳಿದ ಭಕ್ತಜನರು ಒಂದು ಗುಡಿಯನ್ನು ಕಟ್ಟಿಸಿ ಪೂಜಿಸತೊಡಗಿ ದರು. ಇತ್ತೀಚೆಗೆ ಈ ಗುಡಿಯನ್ನು ಜೀರ್ಣೋದ್ದಾರ ಮಾಡಿ ಅಲ್ಲಿ ದೇವಾಲಯವನ್ನು ನಿರ್ಮಿಸಿರುತ್ತಾರೆ.
ಶ್ರೀ ದೇವಿ ಮತ್ತು ಉಪದೇವತೆಗಳು
ಶ್ರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಸೌಮ್ಯ ಮೂರ್ತಿಯಲ್ಲದೆ, ಉತ್ಸವ ಸಮಯ ದಲ್ಲಿ ಉಪಯೋಗಿಸುವ ಶ್ರೀ ಶ್ರೀನಿವಾಸ ದೇವರ ಸ್ವಯಂವರ ಮೂರ್ತಿಯೂ ಇದೆ. ತಿರುಪತಿಯ ಮಹಂತರು ಒಪ್ಪಿಸಿದ ಶ್ರೀ ವೆಂಕಟರಮಣ ದೇವರ ಸ್ವಯಂವರ ಮೂರ್ತಿಯ ಪಂಚಲೋಹದಾಗಿದ್ದು ಬಹು ಪುರಾತನ ಕಾಲದ್ದಾಗಿದೆ. ಶ್ರೀ ಮಹಾ ಮಾಯಾ ಅಮ್ಮನವರ ಮೂಲ ವಿಗ್ರಹವನ್ನು ಉತ್ಸವಗಳಿಗಾಗಿ ಹೊರಗೆ ತರುವ ಕ್ರಮ ರೂಢಿಯಲ್ಲಿಲ್ಲದ ಕಾರಣ ಉತ್ಸವ ಮೂರ್ತಿಯಾಗಿ ಶ್ರೀ ಶ್ರೀನಿವಾಸ ದೇವರ ಮೂರ್ತಿ ಯನ್ನು ಪ್ರತಿಷ್ಟಾಪಿಸಲಾಯಿತು. ಸ್ವಯಂವರ ಮೂರ್ತಿ ತಿರುಪತಿಯ ವೆಂಕಟರಮಣ ದೇವರ ಮೂರ್ತಿಯನ್ನೇ ಹೋಲುತ್ತಿದ್ದು ಈ ಮೂರ್ತಿಗಳನ್ನು ಫಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವ ಕಾಲದಲ್ಲಿ ರಥಾರೋಹಣಕ್ಕೆ ಕೊಂಡೊಯುವ ಕ್ರಮವಿದೆ, ಶ್ರೀ ಮಹಾಮಾಯಾ ಅಮ್ಮನವರ ಜತೆ ಗೋವೆಯಿಂದ ತಂದ ಸ್ಪಟಿಕದ ಶಿವಲಿಂಗವಿರುವುದು ಈ ದೇವಳದ ವೈಶಿಷ್ಟ್ಯ. ಈ ಲಿಂಗವನ್ನು ಸದಾಶಿವ ಅಥವಾ ಚಂದ್ರಮೌಳೀಶ್ವರ ಲಿಂಗ ವೆಂದು ಕರೆಯುತ್ತಾರೆ.
ಗರ್ಭಗುಡಿಯಲ್ಲಿ ಶ್ರೀ ಮಹಾಮಾಯಾ ಅಮ್ಮನವರ ಬಲ ಬದಿಯಲ್ಲಿ ಶ್ರೀ ಮಹಾ ಲಕ್ಷ್ಮಿಯ ಪಂಚಲೋಹದ ವಿಗ್ರಹವಿದೆ. ತಾಮ್ರದ ಶ್ರೀ ಕೃಷ್ಣದೇವರು (ಗೋಪಿಕಾ ಸ್ತ್ರೀ ಸಮೇತ) ವಠ ವೃಕ್ಷದಲ್ಲಿ ಆಶ್ರಯಿಸಿದ ಪ್ರತಿಮೆ ಅತೀ ಪುರಾತನ ಕಾಲದ್ದಾಗಿದೆ. ತಾಮ್ರ ದಿಂದ ತಯಾರಿಸಿದ ಸೀತೆಯನ್ನು ತೊಡೆಯಲ್ಲಿ ಕುಳ್ಳಿರಿಸಿದ ಶ್ರೀ ರಾಮದೇವರಮೂರ್ತಿ ನೋಡಲು ಅತೀ ಮನೋಹರವಾಗಿದೆ. ಮಿಶ್ರಲೋಹದ ಶ್ರೀ ವಿಠಲದೇವರ ಸ್ವಯಂ ವರವನ್ನು ಬಲಿ ಪಾಡ್ಯಮಿಯ ದಿನ ಬಲೀಂದ್ರ ಪೂಜೆಗೆ ಹೊರಗೆ ತರುವ ಕ್ರಮವಿದೆ. ಲಕ್ಷ್ಮಿ ದೇವಿಯನ್ನು ತೊಡೆಯಲ್ಲಿ ಕುಳ್ಳಿರಿಸಿದ ಶ್ರೀ ನಾರಾಯಣ ದೇವರ ಪ್ರತಿಮೆ ನೋಡಲು ಸುಂದರವಾಗಿದೆ. ಒಳಗಡೆ ಶ್ರೀ ಗಣಪತಿ, ಹನುಮಂತ ಗರುಡ, ವಿಠಲ, ಕಾಲ ಭೈರವರುಗಳ ಮೂರ್ತಿಗಳು ಪೂಜಿಸಲ್ಪಡುತ್ತವೆ. ಮತ್ತು ದೊಡ್ಡ ಸಾಲಿಗ್ರಾಮ ಕರಡಿಗೆ ಗಳಲ್ಲಿ ಅನೇಕ ಸಾಲಿಗ್ರಾಮಗಳೂ, ನಾಗದೇವರುಗಳೂ ಇವೆ. ಶ್ರೀ ಅಮ್ಮನ ದರ್ಶನದಲ್ಲಿ ಉ ಪ ಯೋಗಿಸಿಕೊಂಡು ಬರುತ್ತಿದ್ದ ಬೆತ್ತ ಕಂಡಿಯೂ ಇರುತ್ತದೆ, ಅದರ ತುದಿ ಭಾಗದಲ್ಲಿ ಬೆಳಿ ಯ ನಾಗದೇವರು ಇರುವುದು ಒಂದು ವೈಶಿಷ್ಟ, ಮಾರೂರು ಗಣಪತಿ ಪೈಯವರು ದೇವಸ್ತಾನಕ್ಕೆ ವಹಿಸಿಕೊಟ್ಟ ಶ್ರೀ ಮಹಾಲಸಾ ನಾರಾಯಣಿ ಅಮ್ಮನವರ ಬೆಳ್ಳಿಬಿಂಬವು ಪೂಜಿಸಲ್ಪಡುತ್ತದೆ. ನವರಾತ್ರಿ ಸಮಯದಲ್ಲಿ ಇವರುಗಳೇ ಕೊಟ್ಟ ಉತ್ಸವ ಮೂರ್ತಿಯನ್ನು ದೇವಿಯ ಒಂದೊಂದು ಅವತಾರ ಮಾಡಿ ಒಂಬತ್ತು ದಿನಗಳಲ್ಲಿ ವಿಜೃಂಭಣೆಯಿಂದ ಪೂಜಿಸಲ್ಪಡುತ್ತಿದೆ.
ದೇವಸ್ತಾನದ ರಕೇಶ್ವರಿ ಅಮ್ಮನ ಗುಡಿಯ ಹಿಂಬದಿಯಲ್ಲಿ ನಾಗದೇವರ ಕಲ್ಲುಗಳನ್ನು ಹೊಂದಿದ ಗುಡಿ ಇದೆ. ಇನ್ನೊಂದು ಕೆರೆಯ ಎಡ ಬದಿಯಲ್ಲ ಇದೆ,
ಶ್ರೀ ಮಹಾಮಾಯಾ ದೇವಿಯನ್ನೇ ಹಿಂಬಾಲಿಸಿ ಶ್ರೀ ರಕ್ತೇಶ್ವರಿ ಅಮ್ಮ ಮತ್ತು ಇತರ ಗಣಗಳೂ ಬಂದಿದ್ದು ಶ್ರೀ ದೇವಿಯ ಆದೇಶದಂತೆ ಶ್ರೀ ರಕೇಶ್ವರಿ ಅಮ್ಮನನ್ನು ದೇವಸ್ಥಾನದ ಹಿಂದುಗಡೆಯಲ್ಲಿ ಪ್ರತಿಷ್ಟಾಪಿಸಲಾಯಿತು, ಶ್ರೀ ರಕ್ತೇಶ್ವರಿ ಅಮ್ಮನವರ ಗುಡಿಯಲ್ಲಿ 3 ಕಲ್ಲುಗಳಿದ್ದು ಮಧ್ಯದ ಕಲ್ಲು ಶ್ರೀ ರಕ್ತಶ್ವರಿ ಅಮ್ಮ, ಬಲಕ್ಕಿರುವುದು - “ವ್ಯಾಘ್ರ” ಮತ್ತು ಎಡಕ್ಕಿರುವುದು 'ಗಾಢ” ಎಂಬ ಹೆಸರಿನಿಂದ ಕರೆಯಲ್ಪಡುತ್ತವೆ. ಶ್ರೀ ಗುಡಿಯ ಬಲಕ್ಕೆ ಪುರುಷ ಗಣ, ಎಡಕ್ಕೆ ಸ್ತ್ರೀ ಗಣ, ಹಿಂದುಗಡೆ ಮಾಂಕಾಳಿ ಗಣ ಮತ್ತು ಎದುರುಗಡೆ ಗಣ ಸ್ತಂಭಗಳಿವೆ. ಧ್ವಜ ಸ್ತಂಭದ ಬಳಿ ಬ್ರಹ್ಮರ ಗಣ, ಅಗ್ನಿ ಗಣ, ಗುಳಿಗ ಗಣ ಗಳಿರುವುದಲ್ಲದೆ ದೇವಾಲಯದ ಸುತ್ತಲೂ 9 ಕಾವಲು (ರಕ್ಷಕ) ಗಣಗಳೂ ಅಂಬಲದ ಹೊರಗೆ ಎರಡು ಕ್ಷೇತ್ರಪಾಲ ಗಣಗಳೂ ಇವೆ. ಶ್ರೀ ರಕೇಶ್ವರಿ ಅಮ್ಮನವರಿಗೆ ಕೋಳಿ ಕುರಿಗಳನ್ನು ಬಲಿಕೊಡುವ ಕ್ರಮ ಹಿಂದೆ ಇತ್ತು. ಈಗ ಅದನ್ನು ನಿಲ್ಲಿ ಸಲಾಗಿರುತ್ತದೆ. ಶಾಕಾಂಬರಿ ಚತುರ್ದಶಿ ದಿನದಂದು ವಿಶೇಷ ಬಲಿಪೂಜೆ ನಡೆಯುವುದು. ರಾತ್ರಿ ಕಳೆದ ನಂತರ ಭಕ್ತಾದಿಗಳು ಸೇರಿ ಕೋಳಿಗಳನ್ನು ಅರ್ಪಿಸುವ ಕ್ರಮ ಮೊದಲು ನಡೆಯುತ್ತಿತ್ತು. ಮಾರಿಯನ್ನು ಅಳಕೆಯ ವರೆಗೆ ಒಯ್ದು ನೀರಿನಲ್ಲಿ ಬಿಡುವ ಕ್ರಮವೂ ಇತ್ತು. ಈಗ ಪಶು ಬಲಿಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಊರಲ್ಲಿ ಮಹಾಮಾರಿ ರೋಗ ಸಾಂಕ್ರಾಮಿಕವಾಗಿ
ಹರಡುತ್ತಿರುವಾಗಲೇ ಶ್ರೀರಕ್ಕೇಶ್ವರಿಗೆ ವಿಶೇಷ ಪೂಜೆ ಬಲಿಗಳು ಸಂದು ಜನರ ಇಚ್ಚಾರ್ಥ ಗಳನ್ನು ಪೂರೈಸಿಕೊಟ್ಟ ನಿದರ್ಶನಗಳು ಸಾಕಷ್ಟು ಇವೆ. ಶ್ರೀ ರಕೇಶ್ವರಿ ಅಮ್ಮನವರಿಗೆ ಅಮವಾಸ್ಯೆ ಸಂಕ್ರಾಂತಿಗಳಲ್ಲಿ ತೆಂಗಿನಕಾಯಿ ಅರ್ಪಿಸುವ ರೂಢಿ ಈಗಲೂ ಇದೆ. ಕಳೆದ , ಕೆಲವು ವರ್ಷಗಳ ಹಿಂದೆ ಮಂಗಳೂರಿನ ಗೌಡ ಸಾರಸ್ವತ ವೃಂದದವರು ಐದು ವರ್ಶಗಳಿಗೊಮ್ಮೆ ಎಡೆಬಿಡದೆ 48 ದಿನಗಳ ಪರ್ಯಂತ ನಗರದಲ್ಲಿ ಭಜನೆ ನಡೆಸಿ ಶ್ರೀ ಮಹಾ ಮಾಯಾ ಅಮ್ಮನವರ ಸನ್ನಿಧಿಯಲ್ಲಿ ಮಹಾಚಂಡಿಕಾಯಾಗ ಮಾಡಿ ಅಂದು ರಾತ್ರಿ ಶ್ರೀ ರಕೇಶ್ವರಿ ಅಮ್ಮನವರಿಗೆ ಮಹಾಬಲಿ ಪೂಜೆ ಮಾಡುವ ಕ್ರಮವನ್ನು ಇಟ್ಟುಕೊಂಡಿದ ರು. ಈ ಪರಂಪರೆಯಿಂದ ಶ್ರೀ ದೇವಿಯ ಪೂರ್ಣ ಕೃಪಾ ಕಟಾಕ್ಷವು ಈ ಗ್ರಾಮದ ಮೇಲಿದು ಭಕ್ತ ಜನರ ಬೇನೆ ಬೇಸರಗಳು ದೂರವಾಗುತ್ತವೆ
ಶ್ರೀ ದೇವಿಯ ದರ್ಶನ
ಶ್ರೀ ದೇವಿ ಕ್ಷೇತ್ರದ ವೈಶಿಷ್ಟ್ಯವೇನೆಂದರೆ ಶ್ರೀ ದೇವಿಯ ದರ್ಶನ ಸೇವೆಗಳು ದೇವಳದ ಆಡಳಿತ ನಡೆಸಿಕೊಂಡು ಬರುವ ಅರ್ಚಕ ಕುಟುಂಬದವರನ್ನೊಬ್ಬರಿಗೆ ಶ್ರೀ ದೇವಿಯು ಆವೇಶರೂಪದಲ್ಲಿ ಬರುವುದಲ್ಲದೆ ಘಂಟೆ ಮಹಾ ಮಾಯಿಯ ಆವೇಶವು ವೈಶ ಸಮಾಜದ ಒಬ್ಬ ಪಾತ್ರಿಗೆ ಬರುವ ರೂಢಿ ಇತ್ತು. ಶ್ರೀ ದೇವಿಯು ಭಜಕರ ಕೋರಿಕೆಗಳಿಗೆ ಪರಿಹಾರ ರೂಪದ ಉದಾಹರಣೆಗಳನ್ನು ನೀಡಲು ಇದರಿಂದ ಸಾಧ್ಯವಾಗುತ್ತಿತ್ತು, ದೇವಳದ ಆಡಳಿತ ಕುಟುಂಬದ ಪೂರ್ವಿ ಕರಾದ ವೇ। ರಾಮಭಟ್ ಮತ್ತು ವೇ ನರಸಿಂಹ ಭಟ್ ಇವರು ಪ್ರಧಾನ ಪಾತ್ರಿಗಳಾಗಿ ಮತ್ತು ಹಂಚಿನ ಮನೆತನದವರಾದ ಶ್ರೀ ಅಮ್ಮಣ್ಣ ಶೇಟ್ ಮತ್ತು ಗಣಪತಿ ಶೇಟ್ ಇವರು ಉಪದರ್ಶನ ಪಾತ್ರಿಗಳಾಗಿ ತುಂಬಾ ಹೆಸರು ವಾಸಿಯಾಗಿ ದರು. ಶ್ರೀ ರಕೇಶ್ವರಿ ಅಮ್ಮನವರ ದರ್ಶನ ಸೇವೆಯು ಜೋಗಿ ಸಮಾಜದವರೊಬ್ಬರಿಗೆ ಬರುವ ಕ್ರಮವಿದ್ದಿತು. ಅವರ ಸಮಾಜದ ಶ್ರೀ ನಾರಾಯಣ ಎಂಬವರಿಗೆ ಅವರ ಮರಣ ಪರ್ಯಂತ ಆವೇಶ ಬರುತ್ತಿತ್ತು,
ಕೊಡಗು ಪಾಳೆಯಗಾರರಿಂದ ದೇವಸ್ಥಾನ ಲೂಟಿ ಮತ್ತು ಜೀರ್ಣೋದ್ಧಾರ
ಈಗಿನ ದೇವಸ್ಥಾನದ ಅಂಬಲದಿಂದ ಸುಮಾರು 60 ಅಡಿ ದೂರದಲ್ಲಿ ಶ್ರೀ ದೇವರ ರಥ, ಅಡ್ಡ ಪಲ್ಲಂಕಿ, ಭಂಡಿಯನ್ನಿಡುವ ಕೊಟ್ಟಿಗೆ ಇತ್ತು .1703ರಲ್ಲಿ ಮಂಗಳೂರಿಗೆ ಸುಲಿಗೆ ಮಾಡಲು ದಾಳಿ ನಡೆಸಿದ ಕೊಡಗಿನ ಪಾಳೆಯಗಾರರು ಈ ದೇವಸ್ಥಾನದ ಗರ್ಭಗುಡಿಗೆ ಮುಚ್ಚಿದ ತಾಮ್ರದ ತಗಡುಗಳನ್ನು ಇತರ ಆಭರಣ ಮತ್ತು ಅಮೂಲ್ಯ ವಸ್ತು ಒಡವೆ ಗಳನ್ನು ಕೊಳ್ಳೆ ಹೊಡೆದರು. ಜೊತೆಗೆ ವಾಹನಗಳ ಕೊಟ್ಟಿಗೆಗೆ ಬೆಂಕಿಯಿಟು ದೇವಸಾ ನದ ರಥಗಳು, ಪಲ್ಲಂಕಿ ಮತ್ತು ಭಂಡಿಗಳನ್ನು ಸುಟ್ಟು ಹೋದರು. ಶ್ರೀ ದೇವಿಯ ಕೃಪೆ ಯಿಂದಲೋ ಎಂಬಂತೆ ಅಡ್ಡ ಪಲ್ಲಂಕಿ ಭಂಡಿಯಲ್ಲಿಡುವ 2 ಗಂಡಸರ -ಬೊಂಬೆಗಳೂ 4. | ಚಾಮರ ಬಿ ಸುವ ಹೆಂಗಸರ ಬೊಂಬೆಗಳ, ದೇವಸ್ತಾನದ ಅಟ ದಲ್ಲಿ ದು ದರಿಂದ ಅವುಗಳು ಹಾಗೆಯೇ ಉಳಿದವು. ಈ ಮರದ ಕಲಾಕೃತಿಗಳನ್ನು ದೇವಳದಲ್ಲಿ ಇಂದಿಗೂ ಕಾಣಬಹುದು.
ಕೊಡಗು ಪಾಳೆಯಗಾರರ ಸುಲಿಗೆಯಿಂದಾಗಿ ದೇವಸ್ಥಾನವು ಬರಿದಾಗಿತ್ತು.
೧೭೦೭ ರಲ್ಲಿ ನಗರ ಸಂಸ್ಥಾನದ ಅರಸ ಶ್ರೀ ಚೆನ್ನಬಸಪ್ಪನವರು "ದೇವಳದ ಜಿರ್ಣೋಧಾರಕ್ಕೆ ಉದಾರ ಮನೋವೃತ್ತಿಯಿಂದ ನೆರವಾಗಿ ಗರ್ಭಗುಡಿಗೆ ಮುಚ್ಚಲು ತಾಮ್ರದ ತಗಡುಗಳನ್ನು ಕರುಣಿಸುವ ಕೃಪೆ ಮಾಡಿದರು. ಭಜಕರ ಮತ್ತು ಕುಳಾವಿಗಳ ಉದಾರ ಪಡೆದು ದೇವಳದ ಇತರ ಜೀರ್ಣೋದ್ದಾರ ಕಾರ್ಯವನ್ನು ತಾತ್ಕಾಲಿಕವಾಗಿ ಪೂರೈಸಲಾಯಿತು . ದೇವಸ್ಥಾನದ ಗರ್ಭಗ್ರಹವು ಬಹಳ ಜೀರ್ಣಾವಸ್ಥೆಯಲ್ಲಿದ್ದುದರಿಂದ ಅದರ ಪುನರಚೆನೆಯಾಗಿ 1875ರಲ್ಲಿ ದೇವಳದ ಸಂಪೂರ್ಣ ಜೀರ್ಣೋದ್ದಾರದ ಪ್ರತಿಷ್ಠಾ ಕಾರ್ಯವು ಸಾಂಗವಾಗಿ ನಡೆದು ಶ್ರೀ ದೇವಿಯ ಪುನರ್ ಪ್ರತಿಷ್ಠಾ ಕಾರ್ಯವು ಯುವ ಸಂ|| ವೆ ಶಾಖ ಶುದ್ಧ ಪೂರ್ಣಮಿಯ ಶುಭ ಮುಹೂರ್ತದಲ್ಲಿ ನಡೆಯಿತು. ಆ ಪುಣ್ಯ ಕಾರ್ಯಕ್ಕೆ ಮಂಜೇಶ್ವರದ ಶ್ರೀ ಮದನಂತೇಶ್ವರ ದೇವರ ದರ್ಶನದಲ್ಲಿ ಬಂಗಾರದ ಅರವತ್ತು ಮಣಿ ಸರವನ್ನು ಕೊಟ್ಟಿದ್ದು ಈಗಲೂ ಅದನ್ನು ದೇವರಿಗೆ ಅಲಂಕಾರ ಮಾಡಿದ್ದನ್ನು ಕಾಣ ಬಹುದು. ಕೊಡಗಿನ ಪಾಳೆಯಗಾರರು ದೇವಸ್ತಾನದ ರಥವನ್ನು ಸುಟ್ಟು ಹಾಕಲು ದೇವ " ಸಾ ನಕ್ಕೆ ಹೊಸ ಬ್ರಹ್ಮ ರಥವನ್ನು ಮಾಡಿಸಬೇಕಾಯಿತು. ಸುಮಾರು 1790ರಲ್ಲಿ ದೇವ ಸಾನದ ಅರ್ಚಕ ಕುಟುಂಬದ 3 ಸಹೋದರರಾದ ಅಡಿಗಳ್ ವೆಂಕಟೇಶ್ ಭಟ್, ಕೃಷ್ಣ ಭಟ್ ಮತ್ತು ವಾಸುದೇವ ಭಟ್ ರವರಿಗೆ ಗಂಡು ಸಂತತಿ ಇಲ್ಲದಿರಲು ಅವರುಗಳು ಶ್ರೀ ಅಮ್ಮನವರಲ್ಲಿ ಈ ವಿಷಯಕ್ಕಾಗಿ ಬೇಡಿಕೊಳ್ಳಲು ಶ್ರೀ ಅಮ್ಮನವರು ಆದೇಶದಲ್ಲಿ ನಿಮಗೆ ಪುತ್ರನನ್ನು ಕೊಡುವೆ ನನಗೆ ರಥೋತ್ಸವ ಮಾಡಿಸಿ ಎಂಬ ಅಭಯ ನೀಡಿದಳು. ಆ ಪ್ರಕಾರ ಶ್ರೀ ಕೃಷ್ಣ ಭಟ್ ರವರಿಗೆ ಪುತ್ರ ಜನನವಾಗಲು ಅವರುಗಳು ಭಕ್ತ ಜನರಿಂದ ಹಾಗೂ ಕುಳಾವಿ ಗಳಿಂದಲೂ ಈಗಿನ ಬ್ರಹ್ಮ ರಥವನ್ನು ಶ್ರೀ ಅಮ್ಮನವರಿಗೆ ಅರ್ಪಿಸಿದರು. ಮರ್ಕಡ ಕಾಮತ್ ಕುಟುಂಬದವರು ಈಗಿನ ಭಂಡಿ ವಾಹನವನ್ನು ಮಾಡಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾದರು.
ಶ್ರೀ ಮಹಾಮಾಯಾ ತೀರ್ಥ
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಿಗೆ ಸಂಬ ಧಿಸಿದ ಕೆಲವು ಬ್ರಹದಾಕಾರದ ಕೆರೆಗಳಲ್ಲಿ ಈ ದೇಗುಲಕ್ಕೆ ಸಂಬಂಧಿಸಿದ ಕೆರೆಯ ಒಂದು, ದೇವಸ್ಥಾನದ ಸಮ್ಮುಖದಲ್ಲೇ ಕಂಗೊಳಿಸುತ್ತಿರುವ ಈ ಪೆರ್ದೊಳವು ನಗರದ ಕೆಲವು ದೊಡ್ಡ ಕೆರೆಗಳಲ್ಲೊಂದಾಗಿದೆ. ಇತ್ತೀಚೆಗೆ ಅದರ ಜೀರ್ಣೋದ್ದಾರವಾಗಿ ವಿದ್ಯುದ್ದೀಪಾಲಂಕಾರಗಳಿಂದ ಸುಸಜ್ಜಿತವಾಗಿ ಅದೀಗ ಭವ್ಯವಾಗಿ ಕಂಗೊಳಿಸುತ್ತಿದೆ ಈ ಕೆರೆಯ ರಚನೆಗೆ ಸಂಬಂಧಪಟ ಕತೆಯೊಂದಿದೆ. ದೇವಿಯ ಭಕ್ತನಾದ ಓರ್ವ ನವಾಯತ್ ( ಮುಸ್ಲಿಂ ) ವ್ಯಾಪಾರಿಯು ಹಡಗದಲ್ಲಿ ಸರಕು ಹೇರಿಕೊಂಡು ಮಂಗಳೂರಿಗೆ ಬರುತ್ತಿದ್ದಾಗ ಅಳಿವೆ ಬಾಗಿಲಿನಲ್ಲಿ ಅವನ ಹಡಗು ಕೆಸರಿನಲ್ಲಿ ಹೂತು ಹೋಯಿತಂತೆ . ಆತ ದೇವಿಯ ಸಮ್ಮುಖಕ್ಕೆ ಬಂದು ಆತ ದೇವಿಯ ಸಮು, ಖಕ್ಕೆ ಬಂದು ಶ್ರೀ ದೇವಿಯಲ್ಲಿ ದರ್ಶನದಲ್ಲಿ ಉದಾಹರಣೆ ಕೇಳಿದಾಗ ನಾಳೆ ಸೂರ್ಯೋದಯ ದೊಳಗೆ ನಿನ್ನ ಹಡಗು ಕೆಸರಿನಿಂದ ಮೇಲೆ ಬರುವಂತೆ ಮಾಡುತ್ತೇನೆ ಎಂದು ಅಭಯವಿತು ಆ ಕೃಪಾ ದೇವಿ ಅದನ್ನು ನೆರವೇರಿಸಿಯೂ ಕೊಟ್ಟಳು. ಮರುದಿನ ಬೆಳಿಗ್ಗೆ ವ್ಯಾಪಾರಿಯ ಹಡಗು ದಡ ಸೇರಿತ್ತು. ಆಶ್ಚರ್ಯವೇನೆಂದರೆ ದೇವಳದ ನಡೆಯಿಂದ ಹಿಡಿದು ಗರ್ಭಗೃಹದ ಪರ್ಯಂತ ಕೆಸರನ್ನು ಮೆಟ್ಟಿದ ಹೆಜ್ಜೆ ಗುರುತುಗಳು ಕಂಡು ಬಂದುದು, ದೇವಸ್ತಾನದ ಪ್ರತಿಷ್ಠೆಯಾದ ಮೇಲೆ ಶ್ರೀ ದೇವಾಲಯಕ್ಕೆ ಒಂದು ಕೆರೆಯ ಅವಶ್ಯಕತೆ ಇತ್ತು. ಅದು. ಈಗ ಅನಿವಾರ್ಯವಾಗಿ ಕಂಡು ಬಂತು. ಈ ಸಾರ್ಥಕ ಉದ್ದೇಶವನ್ನು ತಿಳಿದ ವ್ಯಾಪಾರಿಯು ಒದಗಿ ಬಂದಿದ್ದ ಸುಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲೋ ಎಂಬಂತೆ ಸ್ವಂತ. ಖರ್ಚಿನಿಂದ ಈಗಿರುವ ದೊಡ್ಡ ಕೆರೆಯನ್ನು ನಿರ್ಮಿಸಿಕೊಟ್ಟನಂತೆ..
ಕಳೆದ ಕೆಲವು ವರ್ಷಗಳಿಂದ ಅವ್ಯವಸ್ಥೆ ಯಲ್ಲಿದ ಈ ಕೆರೆಯು ಪುನರ್ನವೀಕರಣವಾಗಿ. ಅದರ ಉದ್ಘಾಟನೆಯು 3-3-1968ರಂದು ದೇವಳದ ರಥೋತ್ಸವ ಸಂದರ್ಭದಲ್ಲಿ ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್ ಸುಧೀಂದ್ರ ತೀರ್ಥ ವರ್ಯರ ದಿವ್ಯ ಹಸ್ತದಿಂದ ನಡೆ ಯಿತು. ನಗರದಲ್ಲಿ ಅತ್ಯಂತ ವೈಭವದಿಂದ ಜರಗುವ ಸಾರ್ವಜನಿಕ ಗಣೇಶೋತ್ಸವ ಮತ್ತು ನವರಾತ್ರಿ ಸಂದರ್ಭದಲ್ಲಿ ಶ್ರೀ ಶಾರದಾ ಮಹೋತ್ಸವದ ಗಣಪತಿ ಮತ್ತು ಸರಸ್ವತಿ ವಿಗ್ರಹ ಗಳು ಈ ಕೆರೆಯಲ್ಲಿ ವಿಸರ್ಜಿಸಲ್ಪಡತ್ತವೆ. ಈ ಕೆರೆಯಲ್ಲಿ ವಿದ್ಯುದ್ದೀಪಾಲಂಕೃತದಿಂದ ಈ ಸಂದರ್ಭಗಳಲ್ಲಿ ನಡೆಯುವ ಕೆರೆ ದೀಪೋತ್ಸವ ಪ್ರೇಕ್ಷಕ ಜನರ ಕಣ್ಮನಗಳಿಗೆ ಹಬ್ಬವಾಗಿದೆ. ಆಳ ವಿಶಾಲ ಗಂಭೀರವಾದ ಈ ಕೊಳಕ್ಕೆ “ಶ್ರೀ ಮಹಾಮಾಯಾ” ತೀರ್ಥವೆಂಬುದಾಗಿ ನಾಮಕರಣ ಮಾಡಲಾಗಿರುತ್ತದೆ. ಶ್ರೀ ಮಹಾಮಾಯಾ ತೀರ್ಥದ ದಂಡೆಯಲ್ಲಿ ಶ್ರೀ ಹನುಮಂತ ದೇವರ ಗುಡಿಯೊಂದಿದೆ. ಅದರಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಮಿತ್ರ ಲೋಹದ ನಿಂತಿರುವ ವೀರ ಹನುಮಂತನು ಭಕ್ತಾದಿಗಳ ಮನಾಹಭೀಷ್ಟಗಳನ್ನು ನೆರ ವೇರಿಸಲೋ ಎಂಬಂತೆ ಕೈಯನ್ನು ಮೇಲಕ್ಕೆತ್ತಿ ನಿಂತಿರುವನು.
ಶ್ರೀ ದೇವಳದ ಮುಂದುಗಡೆ ಇರುದ ಹಳೆಯ ಅಂಬಲವನ್ನು ಆಧುನಿಕ ಮಾದರಿ ಯಲ್ಲಿ ಪುನಃ ನಿರ್ಮಿಸಿ ಅದರ ಒಂದನೆ ಅಂತಸ್ತಿನಲ್ಲಿ ಶ್ರೀ ವರದೇಂದ್ರ ಸಭಾ ಮಂದಿರ, ಪರವೂರಿಂದ ಬರುವ ಭಜಕರಿಗೆ ತಂಗಲು ಎರಡು ಕೋಣೆಗಳನ್ನು ನಿರ್ಮಿಸಲಾಗಿದೆ. ನವರಾತ್ರಿ ಹಾಗೂ ರಥೋತ್ಸವಗಳಲ್ಲಿ ಈ ಪ್ರಾಸಾದದಲ್ಲಿ ದೇವರುಗಳನ್ನು ಕುಳ್ಳಿರಿಸಿ ಪ್ರಸಾದೋತ್ಸವ ವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಈ ಭವ್ಯ ಪ್ರಸಾದವನ್ನು 26-4-1970 ರಂದು ಶ್ರೀ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿ ಇಲ್ಲಿಯೇ 3 ದಿನ ಮೊಕ್ಕಾಂ ಮಾಡಿದರು.
ಶ್ರೀ ದೇವಸ್ಥಾನದ ಆಡಳಿತ
ಆಥಃ ದೇವಸ್ಥಾನ ಸ್ಥಾಪನೆ ಲಾಗಾಯ್ತು ಆಡಳಿತವನ್ನು ಶ್ರೀ ಅಮ್ಮನವರನ್ನು ಪೂಜಿಸಿ ಬಂದ ಅರ್ಚಕ ಕುಟುಂಬದವರು ನೋಡಿಕೊಳ್ಳುತ್ತಿದ್ದರು.
ದೇವಸ್ಥಾನದಲ್ಲಿ ನಡೆಯುವ ವಿನಿಯೋಗಗಳ ಪದ್ದತಿ
ಶ್ರೀ ದೇವಸ್ಥಾನದಲ್ಲಿ ಪ್ರತಿದಿನ ಪ್ರಾಥಃಕಾಲ ನಿರ್ಮಾಲ್ಯ ವಿಸರ್ಜನೆ ಪೂಜೆ, ರುದ್ರಾಭಿಷೇಕ ನಡೆದು ಮಧ್ಯಾಹ್ನ ತಂತ್ರ ಸಾರೋಕ್ತ ಪೂಜೆ ಮತ್ತು ಶ್ರೀ ಮಹಾಮಾಯಾ ಅಮ್ಮನವರ ಕುರಿತು ದುರ್ಗಾಪೂಜೆ ಅನ್ನ ನೈವೇದ್ಯವಾಗಿ ಮಹಾ ಮಂಗಳಾರತಿಯಾಗು ವುದು, ಸಂಜೆ 6 ಗಂಟೆಗೆ ಸರಿಯಾಗಿ ದೇವರ ಬಾಗಿಲು ತೆಗೆದು ರಾತ್ರಿ ಎಂಟುವರೆಗೆ ರಾತ್ರಿ ಪೂಜೆಯಾಗಿ ಹಣ್ಣುಕ್ಯಾ ನೈವೇದ್ಯ ನಡೆದು ಬೀಗ ಮುದ್ರೆಯಾಗುವುದು.
ಶ್ರೀ ದೇವಸ್ಥಾನದಲ್ಲಿ ನಡೆಯುವ ಪಂಚಪರ್ವ ಮಹೋತ್ಸವಗಳು 1 ಚೈತ್ರ ಶುದ್ಧ ಪಾಡ್ಯದಂದು - ಚಾಂದ್ರಮಾನ ಯುಗಾದಿ 2 ಚೈತ್ರ ಶುದ್ಧ ನವಮಿಯಂದು - ಶ್ರೀ ರಾಮ ನವಮಿ 3 ಚೈತ್ರ ಶುದ್ಧ ಹುಣ್ಣಿಮೆಯಂದು - ಶ್ರೀ ಹನುಮ ಜಯಂತಿ 4 ವೈಶಾಖ ಶುದ್ಧ ಹುಣ್ಣಿಮೆಯಂದು - ವೈಶಾಖ ಹುಣ್ಣಿಮೆ ಉತ್ಸವ ಹಾಗೂ ಶ್ರೀ ದೇವಿಯ ಪುನರ್ ಪ್ರತಿಷ್ಠಾ ವರ್ಧಂತಿ 5 ಶ್ರಾವಣ ಶುದ್ಧ ಪಂಚಮಿಯಂದು - ನಾಗರ ಪಂಚಮಿ 6 ಶ್ರಾವಣ ಶುದ್ದ ಚತುರ್ದಶಿ - ಶ್ರೀ ವರಮಹಾಲಕ್ಷ್ಮೀ ವೃತ | 7. ಶ್ರಾವಣ ಶುದ್ಧ ಹುಣ್ಣಿಮೆ - ಋಗುಪಾಕರ್ಮ (ನೂಲ ಹುಣ್ಣಿಮೆ) 8 ಶ್ರಾವಣ ಬಹುಳ ಅಷ್ಟಮಿ -"ಶ್ರೀ ಕೃಷ್ಣಾಷ್ಟಮಿ 9 ಭಾದ್ರಪದ ಶುದ್ಧ ಚೌತಿ - ಶ್ರೀ ವಿನಾಯಕ ಚತುರ್ಥಿ 10 ಭಾದ್ರಪದ ಶುದ್ಧ ಚತುರ್ದಶಿ - ಅನಂತ ಚತುರ್ದಶಿ (ಅನಂತ ವೃತ) | 11 ಆಶ್ವಿಜ ಶುದ್ಧ ಪಾಡ್ಯದಿಂದ ನವಮಿ ವರೇಗೆ ನವರಾತ್ರಿ ಉತ್ಸವ, ಆಶ್ವಿಜ ಶುದ್ದ ದಶಮಿಯಂದು ವಿಜಯದಶಮಿ, ನವಾನ್ನ ಪೂಜೆಗಳು 12 ಆಶ್ವಿಜ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿ ವರೇಗೆ ಪಶ್ಚಿಮ ಜಾಗರ * ಪೂಜೆ, 13 ಕಾರ್ತಿಕ ಶುದ್ಧ ಪಾಡ್ಯದಂದು ಬಲೀಂದ್ರ ಪೂಜೆ, ಶುದ್ಧ ಏಕಾದಶಿಯಂದು ಕ್ಷೀರಾಬ್ಲಿ * ಪೂಜೆ ಮತ್ತು ದ್ವಾದಶಿಯಂದು ತುಳಸೀ ಪೂಜೆ, 14 ಕಾರ್ತಿಕ ಶುದ್ಧ ಹುಣ್ಣಿಮೆಯಂದು ಕಾರ್ತಿಕ ದೀಪೋತ್ಸವ, ಮರುದಿನ ಮರು ದೀಪೋತ್ಸವ, 15 ಪುಷ್ಯ ಶುದ್ಧ ಚತುರ್ದಶಿಯಂದು ಶಾಕಂಬರಿ ಪೂಜೆ ಹಾಗೂ ಶ್ರೀ ರಕೇಶ್ವರಿ ಅಮ್ಮನವರಿಗೆ ವಿಶೇಷ ಬಲಿಪೂಜೆ.
16, ಮಾಘ ಶುದ್ಧ ನವಮಿಯಂದು ಮಧ್ವ ನವಮಿ ಉತ್ಸವ, 17 ಮಾಘ ಬಹುಳ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆ 18 ಫಾಲ್ಗುಣ ಶುದ್ಧ ಪಾಡ್ಯದಿಂದ ಆರು ದಿನಗಳ ವರೆಗೆ ಬ್ರಹ್ಮ ರಥೋತ್ಸವವು ಜರಗುವುದು.
ವಿಶೇಷ ಉತ್ಸವಗಳು 1. ಶ್ರೀ ಅಮ್ಮನವರ ಪುನರ್ ಪ್ರತಿಷ್ಠಾ ವರ್ಧಂತಿ :- ವೈಶಾಖ ಶುದ್ಧ ಹುಣ್ಣಿಮೆ ತಂದು ಶ್ರೀ ಅಮ್ಮನವರ ಪುನರ್ ಪ್ರತಿಷ್ಠಾ ವರ್ಧಂತಿ ಆಚರಿಸಲಾಗುವುದು, ಮಧ್ಯಾಹ್ನ ಅಮ್ಮನವರಿಗೆ ಮಹಾಪೂಜೆ, ಬಳಿಕ ಸಂತರ್ಪಣೆ, ರಾತ್ರಿ ವಿಶೇಷ ಅಲಂಕಾರ ಪೂಜೆ, ಬೆಳ್ಳಿ ಪಲ್ಲಂಕಿ ಉತ್ಸವ ನಡೆದು ರಾತ್ರಿ ಪನಿವಾರ ಪೂಜೆ ನಡೆಯುವುದು, 2. ಶ್ರೀ ಅನಂತ ವೃತ - ಭಾದ್ರಪದ ಶುದ್ದ ಚತುರ್ದಶಿಯಂದು ಅನಂತ ವೃತ ವನ್ನು ಆಚರಿಸಲಾಗುವುದು. ಮಧ್ಯಾಹ್ನ ಶ್ರೀ ಅನಂತ ದೇವರ ಮಹಾಪೂಜೆ ನಡೆದು ವಿವಿಧ ಭಕ್ಷಗಳ ಹರಿವಾಣ ನೈವೇದ್ಯವಾಗಿ ಶ್ರೀ ಅನಂತ ದೇವರಿಗೆ ಮಹಾಪೂಜೆ ನಡೆದು ತದನಂತರ ಭಕ್ತಾದಿಗಳಿಗೆ ಸಮಾರಾಧನೆ ನಡೆಯುವುದು. ರಾತ್ರಿ ಅನಂತ ದೇವರಿಗೆ ವಿಶೇಷ ಹೂವಿನ ಪೂಜೆ ನಡೆಯುವುದು. 3 ನವರಾತ್ರಿ ಮಹೋತ್ಸವ:- ಆಶ್ವಿಜ ಶುದ್ಧ ಪಾಡ್ಯದಿಂದ ಆಶ್ವಿಜ ಶುದ್ದ, ನವಮಿ ಯವರೇಗೆ ನವರಾತ್ರಿ ಉತ್ಸವವನ್ನು ಆಚರಿಸಲಾಗುವುದು. ಮಧ್ಯಾಹ್ನ ಕುಮಾರಿ ಪೂಜನ ಸುವಾಸಿನಿ ಬ್ರಾಹ್ಮಣ ಸಂತರ್ಪಣೆ ನಡೆದು ರಾತ್ರಿ ದುರ್ಗಾ ನಮಸ್ಕಾರ ಪೂಜೆ, ರಂಗಪೂಜೆ ಯಾಗಿ, ದೇವರ ಉತ್ಸವವು ಪೇಟೆಗೆ ಹೋಗಿ ಬಂದು ಬಲಿ ದೀಪಾರಾಧನೆ ವಗೈರೆ ಇಲ್ಲಿಯ ಪದ್ದತಿ ಪ್ರಕಾರ ನಡೆದುಕೊಂಡು ಬರುವುದು ಈ ಪ್ರಕಾರ 9 ದಿನಗಳೂ ಉತ್ಸವ ನಡೆದು 9ನೇ ದಿನ ಮಹಾಚಂಡಿಕಾ ಹೋಮ ಕುಮಾರಿ ಪೂಜೆ, ಸುವಾಸಿನಿ ಬ್ರಾಹ್ಮಣ ಸಂತರ್ಪಣೆ ಸಮಾರಾಧನೆ ರಾತ್ರಿ ಭಂಡಿ ಉತ್ಸವ ರಕೇಶ್ವರಿ ಅಮ್ಮನವರ ಮಹಾಬಲಿ ಪೂಜೆ ವಗೈರೆ ನಡೆ ಯುವುದು, ದಶಮಿಯಂದು ರಾತ್ರಿ ಘಟ ವಿಸರ್ಜನೆಯಾಗಿ ಘಟ ತೀರ್ಥ ಮತ್ತು ಮರಳಿ ಯನ್ನು ರಾತ್ರಿ ಪೂಜೆಯ ನಂತರ ಭಕ್ತಾದಿಗಳಿಗೆ ಹಂಚುವುದರೊಂದಿಗೆ ನವರಾತ್ರಿ ಉತ್ಸವವು ಕೊನೆಗೊಳ್ಳುವುದು, 4. ಶ್ರೀ ಶಾಕಂಭರೀ ದೇವಿ ಪೂಜೆ :- ಪುಷ್ಯ ಶುದ್ದ ಚತುರ್ದಶಿಯಂದು ಶಾಕಾಂ ಬರಿ ದೇವಿ ಕುರಿತು ಸದ್ರಿ ದೇವಸ್ಥಾ ನ ಸ್ಥಾಪನೆಯಾದಂದಿನಿಂದ ಪೂಜೆ ಉತ್ಸವ ಸಂತರ್ಪಣೆ ನಡೆದು ಬಂದಿರುತ್ತದೆ. ದುರ್ಗಾದೇವಿ ಅವತಾರ ತಳೆದು ಜಗತಿ ಗೆ ಬಂದ ಕ್ಷಾಮನಿವಾರಣೆ ಮಾಡಿದ ಸ್ಮರಣಾರ್ಥವಾಗಿ ಈ ದಿವಸ ವಿಧಿ ಪ್ರಕಾರ ಪಂಚಾಮೃತ ಅಭಿಷೇಕ, ಮಹಾ ಪೂಜೆ ಸುವಾಸಿನಿ ಬ್ರಾಹ್ಮಣ ಸಂತರ್ಪಣೆ ನಡೆದು ರಾತ್ರಿ ಉತ್ಸವ ಬಲಿ ಮತ್ತು ಶ್ರೀ ರಕ್ಷೆ? ಶ್ವರಿ ಅಮ್ಮನವರ ಮಹಾಬಲಿ ಪೂಜೆ ನಡೆಯುತ್ತಲಿರುವುದು, 5. ಶ್ರೀ ಮಹಾಶಿವರಾತ್ರಿ :- ಮಾಘ ಮಾಸದಲ್ಲಿ ನಡೆಯುವ ಮಹಾ ಶಿವರಾ ದಿನ ಶ್ರೀ ಈಶ್ವರ ದೇವರಿಗೆ ಪೂಜೆ, ಏಕಾದಶ ರುದ್ರಾಭಿಷೇಕ, ಸಹಸ್ರನಾಮ, ಶೋಷ ಷೋಪಚಾರ ಪೂಜೆ ನಡೆದು ಮರುದಿನ ಬ್ರಾಹ್ಮಣ ಸುವಾಸಿನಿ ಸಂತರ್ಪಣೆ, ರಾತ್ರಿ ಉತ್ಸವ. ಬಲಿಪೂಜೆ ನಡೆಯುವ ಪದ್ಧತಿ ಇದೆ. 6, ಶ್ರೀ ಬ್ರಹ್ಮ ರಥೋತ್ಸವ :- ಶ್ರೀ ದೇವಸ್ಥಾನದ ಬ್ರಹ್ಮ ರಥೋತ್ಸವದ ಫಾಲ್ಗುಣ ಶುದ್ಧ ಪಾಡ್ಯದಂದು ಮೊದಲ್ಗೊಂಡ 6 ದಿನಗಳ ಪರ್ಯಂತ ವಿಜೃಂಭಣೆಯಿಂದ ನಡೆಯುವುದು, ಪ್ರಥಮ ದಿನ ಬೆಳಿಗ್ಗೆ ದೇವತಾ ಪ್ರಾರ್ಥನೆ ಪುಣ್ಯಾವಾಚನ ಅಂಕುರಾರ್ಪಣ, ಯಜ್ಞ ನಡೆದು ಪೂರ್ಣಾಹುತಿಯಾಗಿ ವಾಡಿಕೆಯಂತೆ ಧ್ವಜಾರೋಹಣ ಬಲಿಯಾಗಿ ಸಂತ ರ್ಪಣೆ ನಡೆಯುವುದು, ರಾತ್ರಿ ಬಂಡಿ ಉತ್ಸವ ಗೋಪುರೋತ್ಸವವಾಗಿ, ವಸಂತ ಪೂಜೆಯಾಗಿ ದೇವರು ಸಿಂಹಾಸನಕ್ಕೆ ಮರಳುವುದು. ಇದೇ ಪ್ರಕಾರ 3 ದಿನಗಳು ನಡೆದು ಬಂದು 4ನೇ ದಿನ ಕ್ರಮದಂತೆ ಮಧ್ಯಾಹ್ನ ಪೂಜೆ, ಬ್ರಾಹ್ಮಣ ಸಂತರ್ಪಣೆ ನಡೆದು ರಾತ್ರಿ ಗೋಪುರೋ ತೃವ, ಕೆರೆ ದೀಪೋತ್ಸವ, ಮೃಗ ಬೇಟೆಯಾಗಿ ಬಂಡಿ ಉತ್ಸವವಾಗಿ ವಸಂತ ಪೂಜೆ ನಡೆ ಯುವುದು. 5ನೇ ದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಗಂಗಾಭಿಷೇಕ, ಮಹಾಭಿಷೇಕ ನಡೆದು ಯಜ್ಞದ ಪೂರ್ಣಾಹುತಿಯಾಗಿ ಬೆಳ್ಳಿ ಪಲ್ಲಂಕಿಯಲ್ಲಿ ಪಟ್ಟದ ವೆಂಕಟರಮಣ ಹಾಗೂ ಶ್ರೀನಿವಾಸ ದೇವರನ್ನು ಕುಂಡಿಸಿ ಸುತ್ತು ಬಲಿ ನಡೆದು ಬ್ರಹ್ಮರಥದ ಹತ್ತಿರ ರಥ ಪೂಜೆಯಾಗಿ, ರಥಾರೋಹಣವಾಗುವ ಪದ್ಧತಿ ಇದೆ. ನಂತರ ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳಿಗೆ ಸಮಾರಾಧನೆ ನಡೆಯುವುದು. ರಾತ್ರಿ ರಥೋತ್ಸವ ನಡೆದು ಗೋಪುರೋತ್ಸವ ವಸಂತ ಪೂಜೆಯಾಗಿ ದೇವರನ್ನು ಮೂಲ ಸಿಂಹಾಸನಕ್ಕೆ ಕೊಂಡು ಹೋಗುವುದು, ಮರುದಿನ ಬೆಳಿಗ್ಗೆ ದ್ವಾರಪೂಜೆ ಚೂರ್ಣೋತ್ಸವ, ವಸಂತ ಪೂಜೆ ನಡೆದು ಅವಭ್ರತ ಪಲ್ಲಂಕಿ ಉತ್ಸವವು ಪೇಟೆಗೆ ಹೋಗಿ ಕೆರೆಯ ಹತ್ತಿರ ಬಂದು ಸ್ನಾನವಾಗಿ ದೇವಳಕ್ಕೆ ಮರಳಿ ಬಂದು ಧ್ವಜ ವಿಸರ್ಜನೆಯಾಗುವುದು. ತದನಂತರ ಸಂಪ್ರೋಕ್ಷಣೆ ಮಹಾಪೂಜೆ ನಡೆದು ಭಕ್ತಾದಿಗಳಿಗೆ ದೊಡ್ಡ ಪ್ರಮಾಣದ ಸಂತರ್ಪಣೆ ನಡೆದು ರಥೋತ್ಸವ ಕಾರ್ಯಕ್ರಮ ಪೂರ್ತಿಗೊಳ್ಳು ವುದು,
ಶ್ರೀ ವೆಂಕಟರಮಣ ದೇವಸ್ಥಾನದ ದೇವರ ಒಟ್ಟಿಗೆ ನಡೆಯುವ ಉತ್ಸವಗಳ ವಿವರ :-
ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ ಶ್ರೀ ವೆಂಕಟರಮಣ ದೇವಸ್ಥಾನವು ಬಳಿಯಲ್ಲೇ ಇದೆ. ಈ ಎರಡು ದೇವಸ್ಥಾನಗಳು ನಮ್ಮ ಸಮಾಜದ ಎರಡು ಕಣ್ಣು ಗಳೆಂದರೆ ಅತಿಶಯೋಕ್ತಿ ಎಂದೆನಿಸಲಾರದು, ಅದಕ್ಕೆ ತಕ್ಕಂತೆ ಎರಡೂ ದೇವಳಗಳ ಮಧ್ಯೆ ಸಾಮರಸ್ಯ ಹಾಗೂ ಹೊಂದಾಣಿಕೆಗಳಿದ್ದು ಅನೇಕ ಉತ್ಸವಗಳು ಜತೆಯಲ್ಲೇ ನಡೆಯುವುದು. ಹೀಗೆ ಜತೆಯಲ್ಲೇ ನಡೆಯುವ ಉತ್ಸವಗಳು ;- .
೧) ಉತಾನ ದ್ವಾದಶಿಯಂದು ನಡೆಯುವ ತುಳಸೀ ಪೂಜೋತ್ಸವ : ಎರಡೂ ದೇವಸ್ಥಾನಗಳ ದೇವರುಗಳು ಅವರವರ ಪಲ್ಲಂಕಿಯಲ್ಲಿ ಕುಳಿತು ಜತೆಯಲ್ಲೇ ರಥ ಬೀದಿವರೆಗೆ ಹೋಗಿ ಮರಳಿ ದೇವಸ್ಥಾನಕ್ಕೆ ಬರುವುದು. .. 2. ವಿಜಯ ದಶಮಿಯಂದು ನವಭತ್ತದ ಕಣಸು ತರುವರೆ ವಾಡಿಕೆಯಂತೆ ಎರಡೂ ದೇವ ಪಾ ನದ ಪಲ್ಲಂಕಿಗಳು ಕರಂಗಲ್ಪಾಡಿಗೆ ಹೋಗಿ ಭತ್ತದ ಕಣಸಿಗೆ ಪೂಜಿಸಿ ಉತ್ಸವ ಬಂದು ದೇವಸ್ಥಾನಕ್ಕೆ ಮರಳುವುದು ಮತ್ತು ಭಕ್ತ ಜನರಿಗೆ ಕಣಸ ಹಂಚುವುದು, - 3, ಮಧ್ವನವಮಿಯಂದು ಶ್ರೀ ವೆಂಕಟರಮಣ ದೇವಸ್ಥಾನದ ಸಣ್ಣ ರಥದಲ್ಲಿ ಎರಡೂ ಈ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ರಥೋತ್ಸವ ನಡೆಯುವ ದೃಶ್ಯ ಎಲ್ಲರ • ಕಣ್ಮನಗಳನ್ನು ತಣಿಸುವುದು, _4, ವೈಶಾಖ ಶುದ್ಧ ಹುಣ್ಣಿಮೆಯಂದು ಎರಡು ದೇವಳದ ದೇವರುಗಳು ಒಟ್ಟಿಗೆ ಬೆಳ್ಳಿ ಪಲ್ಲಂಕಿಯಲ್ಲಿ ಪೇಟೆಯವರೇಗೆ ಉತ್ಸವ ಬರುವುದು, 5. ಕಾರ್ತಿಕ ಲಕ್ಷ ದೀಪೋತ್ಸವ : - ಕಾರ್ತಿಕ ಶುದ್ಧ ಹುಣ್ಣಿಮೆಯಂದು ಎರಡೂ ದೇವಸ್ಥಾನದ ದೇವರುಗಳು ಒಟ್ಟಿಗೆ ಶ್ರೀ ವೆಂಕಟರಮಣ ದೇವಸ್ಥಾನದ ಕೆರೆಯವರೇಗೆ ಹೋಗಿ ಅಲ್ಲಿ ದಾತ್ರಿ ಹೋಮ, ಪೂಜೆ, ವನ ಭೋಜನ ಸಮಾರಾಧನೆ ನಡೆದು ರಾತ್ರಿ ಎರಡೂ ದೇವರೂ ಅವರವರ ಅಲಂಕೃತ ಬೊಂಬೆ ಚವರು ವಾಹನಗಳಲ್ಲಿ ಕುಳಿತು ಎರಡು ದಿನ ದೀಪೋತ್ಸವ ನಡೆಯುವುದು. ಈ ತರ ದೀಪೋತ್ಸವದಂದು ಎರಡು ದೇವರುಗಳು ಒಟ್ಟಿಗೆ ಹೋಗುವ ಸೊಗಸು ಬೇರೆಲ್ಲಿಯೂ ಕಾಣಸಿಗದು. ಹಿಂದೆ ಪ್ರತಿ ದಶಮಿ ದಿಂಡಿ ಉತ್ಸವವು ನಡೆಯುವಾಗೈಯು ಎರಡು ದೇವರೂ ಜತೆಯೇ ಹೋಗುವ ಪದ್ದತಿ ಇತ್ತು. ಆದರೆ ಜಾತಿ ದಂಗೆಗಳ ಬಳಿಕ ಈ ಉತ್ತ ವವು ಅವರ ವರ ದೇವಸ್ಥಾನಗಳೊಳಗೇ ನಡೆಯುವುದು. ಶ್ರೀ ವೆಂಕಟರಮಣ ದೇವಳದಲ್ಲಿ ನಡೆ ಯುವ ರಥೋತ್ಸವ ಸಮಾರಾಧನೆಗಳ ಸಮಯ ಈ ದೇವಸ್ಥಾನದಲ್ಲಿಯ ಎಲೆ ಹಾಕುವ ಹಾಗೂ ಈ ದೇವಸ್ಥಾನದಲ್ಲಿ ಸಮಾರಾಧನೆಗಳ ಸಮಯದಲ್ಲಿ ಶ್ರೀ ವೆಂಕಟರಮಣ ದೇವ ಸ್ಥಾನದಲ್ಲಿ ಎಲೆ ಹಾಕುವ ಪದ್ಧತಿ ರೂಢಿಯಲ್ಲಿದೆ.
ಶ್ರೀ ದೇವಿಯ ಈ ಪುಣ್ಯ ಚರಿತ್ರೆಯನ್ನು ಯಾರು ಪಠಣ ಮಾಡುತ್ತಾರೋ ಅಥವಾ ಶ್ರವಣ ಮಾಡುತ್ತಾರೋ ಅವರಿಗೆಲ್ಲಾ ಪರವು ಕಲ್ಯಾಣಿ, ಓಂಕಾರ ಸ್ವರೂಪಿಣಿ, ಭಕ್ತಿ ಮುಕ್ತಿ ಪ್ರದಾಯಿನಿಯಾದ ಶ್ರೀ ಕುಕ್ಕೇರಿ ಮಹಾಮಾಯಾ ಅಮ್ಮನವರು ಆಯುರಾ .ರೋಗ್ಯ, ಅಭಿವೃದ್ಧಿ, ಧನ ಕನಕಾದಿ ಸಂಪತ್ತು ಹಾಗೂ ಸಮೃದ್ಧಿ, ವಿದ್ಯಾ ಬುದ್ದಿ, ಸಂತಾನ ಭಾಗ್ಯ ಹಾಗೂ ಸಂಕಲ ಸನ್ಮಂಗಲಗಳನ್ನು ಕರುಣಿಸಿ ಹರಸುವಳು. ಇಂತಹ ಪರಮ ಪವಿತ್ರ ಶಕ್ತಿ ಪೀಠದ ಅಭಿವೃದ್ಧಿ ಮತ್ತಷ್ಟು ಉನ್ನತಿಗೇರುವಂತೆ ಭಕ್ತ ವತ್ಸಲೇಯಾದ ಶ್ರೀ ಕುಕ್ಕೇರಿ ಮಹಾಮಾಯಾ ಅಮ್ಮನವರು ಅನುಗ್ರಹಿಸಲಿ ಎಂದು ಹಾರೈಸೋಣ.
ಈ ಬಾರಿ ನಡೆಯಲಿರುವ ಬ್ರಹ್ಮ ರಥೋತ್ಸವ ದಿನಾಂಕ : 24-02-2020 ರಿಂದ ದಿನಾಂಕ : 29-02-2020 ಪ್ರಿಯ ಭಗವದ್ಭಕ್ತರೆ, ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾಲಿವಾಹನ ಶಕ ವರ್ಷ ೧೯೪೧ನೇ ವಿಕಾರಿ ನಾಮ ಸಂ|ರದ ಪಾಲ್ಗುಣ ಶು ಪಾಡ್ಯದಿಂದ ಪಾಲ್ಗುಣ ಶು| ಪಂಚಮಿಯವರೆಗೆ ತಾ, 24-02-2020 ಸೋಮವಾರದಿಂದ ತಾ. 29-08-2020ನೇ ಶನಿವಾರದವರೆಗೆ ಕಾಲಂಪ್ರತಿ ನಡೆದು ಬರುವ : ಶ್ರೀ ಬ್ರಹ್ಮ ರಥೋತ್ಸವ ಈ ಕೆಳಗಿನ ಕಾರ್ಯಕ್ರಮಗಳಂತೆ ಶ್ರೀ ದೇವತಾನುಗ್ರಹದಿಂದ ವಿಧಿಯುಕ್ತ ಜರಗಲಿರುವುದು.
ಆ ಪ್ರಯುಕ್ತ ಈ ಮಹೋತ್ಸವಗಳಲ್ಲಿ ಭಕ್ತಾಭಿಮಾನಿಗಳಾದ ತಾವು ಸರ್ವರೂ ಬಂದು ಭಾಗವಹಿಸಿ, ಶ್ರೀ ಅಮ್ಮನವರ - ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ. ಕಾರ್ಯಕ್ರಮಗಳು ತಾ. 24-02-2020 ಸೋಮವಾರ (ಪಾಡ್ಯ) ಧ್ವಜಾರೋಹಣ ಹಗಲು. 10.00ಕ್ಕೆ ಪ್ರಾರ್ಥನೆ, ಮಹಾಪೂಜೆ 10.30ಕ್ಕೆ ಯಜ್ಞಾರಂಭ 3.00ಕ್ಕೆ ಯಜ್ಞದಲ್ಲಿ ಆರತಿ 3.30ಕ್ಕೆ ಮಹಾಬಲಿ, ಧ್ವಜಾರೋಹಣ 5.00ಕ್ಕೆ ಸಮಾರಾಧನೆ ರಾತ್ರಿ 8-00ಕ್ಕೆ ಭಂಡಿ ಗರುಡೋತ್ಸವ ಗೋಪುರೋತ್ಸವ 10.30ಕ್ಕೆ ವಸಂತ ಪೂಜೆ | ಪ್ರಸಾದ ವಿತರಣೆ 25-0²-2020ನೇ ಮಂಗಳವಾರ (ಅಡಿಗೆ) ಹಗಲು 12.00ಕ್ಕೆ ಯಜ್ಞಾರಂಭ11 ಕಲಂಕಿ ಹಗಲೊತ್ಸವ \ || \VG. ಆಗಿ 65.00ಕ್ಕೆ ಸಮಾರಾಧನೆ 9 ರಾತ್ರಿ 8.00ಕ್ಕೆ ಭಂಡಿ ಪ್ರಾಣೋತ್ಸವ, ಗೋ ತವ, ಗೋಪುರೋತ್ಸವ 10.30ಕ್ಕೆ ವಸಂತ ಪೂಜೆ ಪ್ರಸಾದ ವಿತರಣೆ 26-02-2020 ಬುಧವಾರ (ತದಿಗೆ ಹಗಲು 12.00ಕ್ಕೆ ಯಜ್ಞಾರಂಭ 3.30ಕ್ಕೆ ಯಜ್ಞದಲ್ಲಿ ಆರತಿ ಸಕ್ಕೆ ಮಹಾಬಲಿ, ಬೆಳ್ಳಿ ಪಲ್ಲಂಕ್ಕಿ ಹಗಲೋತ್ಸವ 5.00ಕ್ಕೆ ಸಮಾರಾಧನೆ ರಾತ್ರಿ 8.00ಕ್ಕೆ ಭಂಡಿ ಗರುಡೋತ್ಸವ, ಗೋಪುರೋತವ 10.30ಕ್ಕೆ ವಸಂತ ಪೂಜೆ, ಪ್ರಸಾದ ವಿತರಣೆ 27-02-2020 ಗುರುವಾರ ) ಮೃಗಬೇಟೆ ಉತವ ಹಗಲು 1.00ಕ್ಕೆ ಯಜ್ಞಾರಂಭದ 3.45ಕ್ಕೆ ಯಜ್ಞದಲ್ಲಿ ಆರತಿ 4.00ಕ್ಕೆ ಮಹಾಬಲಿ, ಬೆಳ್ಳಿ ಲಾಲ್ಕಿ ಹಗಲೋತ್ಸವ 5.00ಕ್ಕೆ ಸಮಾರಾಧನೆ ರಾತ್ರಿ 8.00ಕ್ಕೆ ಗೋಪುರೋತ್ಸವ ಕೆರೆ ದೀಪೋತ್ಸವ 9.00ಕ್ಕೆ ಮೃಗಬೇಟೆ ಉತ್ಸವ, ಸಣ್ಣ ರಥೋತ್ಸವ 12.30ಕ್ಕೆ ವಸಂತ ಪೂಜೆ, ಪ್ರಸಾದ ವಿತರಣೆ 28-02-2020 ಶುಕ್ರವಾರ (ಪಂಚಮಿ) ಶ್ರೀ ಬ್ರಹ್ಮ ರಥೋತ್ಸವ ಹಗಲು 8.00ಕ್ಕೆ ಪ್ರಾರ್ಥನೆ 10.30ಕ್ಕೆ ಪಂಚಾಮೃತ ಅಭಿಷೇಕ, ಗಂಗಾಭಿಷೇಕ ಮಹಾಭಿಷೇಕ ಯಜ್ಞದಲ್ಲಿ ಪೂರ್ಣಾಹುತಿ ಆರತಿ ಮಹಾಬಲಿ 5.30ಕ್ಕೆ ರಥಪೂಜೆ, ಶ್ರೀ ಬ್ರಹ್ಮರಥಾರೋಹಣ 4.00ಕ್ಕೆ 4.45ಕ್ಕೆ ರಾತ್ರಿ 6.00ಕ್ಕೆ ಸಮಾರಾಧನೆ O 10.30ಕ್ಕೆ ರಥೋತ್ಸವ). 411:00ಕ್ಕೆ ಗೋಪುರೋತ್ಸವ ೧೧೧೨ 2.30ಕ್ಕೆ ವಸಂತ ಪೂಜೆ ಪ್ರಸಾದ ವಿತರಣೆ20-02-2020 ಶನಿವಾರ ಅವಭ್ರತೋತ್ಸವ 8.30ಕ್ಕೆ ದ್ವಾರಪೂಜೆನ್ಸಿ 11,00ಕ್ಕೆ ಚೂರ್ಣೋತ್ಸವ, ವಸಂತ ಪೂಜೆ 12.00ಕ್ಕೆ ಅವಭ್ರತ ಉತ್ಸವ ರಾತ್ರಿ 6.00ಕ್ಕೆ ಧ್ವಜ ವಿಸರ್ಜನೆ, ಮಹಾಪೂಜೆ, ಸಂಪ್ರೋಕ್ಷಣೆ 9.00ಕ್ಕೆ ಸಮಾರಾಧನೆ. ಸಂಜೆ 6:30ಕ್ಕೆ ಶ್ರೀಮತಿ ನಂದಿತಾ ಯಜ್ಞವಂತ ಪೈ ಇವರಿಂದ ಭಕ್ತಿ ಸಂಗೀತ
ಚಿತ್ರ ಮತ್ತು ಲೇಖನ : ಮಂಜು ನೀರೇಶ್ವಾಲ್ಯ
Subscribe to:
Posts (Atom)